kalash
Adhyātmaprakāsha Kāryālaya
एतज्ज्ञेयं नित्यमेवात्मसंस्थम् | नातः परं वेदितव्यं हि किञ्चित् ||
Vedanta Shibira of October 2009 (09-10-2009 to 15-10-2009)
ಶಿಬಿರ : ತಾರೀಖು 09-10-2009 ರಿಂದ 15-10-2009 ರ ವರೆಗೆ
ಸ್ಥಳ : ಮತ್ತೂರು, ಶಿವಮೊಗ್ಗ
ವಿಷಯ : ಕೇನೋಪನಿಷತ್ತು ಮತ್ತು ದಕ್ಷಿಣಾಮೂರ್ತಿಸ್ತೋತ್ರದ ಮೇಲೆ ಉಪನ್ಯಾಸಗಳು
ಬೆಳಗ್ಗೆ: ಕೇನೋಪನಿಷತ್ತು
ಸಂಜೆ: ದಕ್ಷಿಣಾಮೂರ್ತಿ ಸ್ತೋತ್ರ
ಪ್ರತಿದಿನ ಸಂಜೆ ಗಮಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಉಪನ್ಯಾಸಕರು : ವೇ|| ಬ್ರ || ಶ್ರೀ|| ಅಶ್ವತ್ಥನಾರಾಯಣ ಅವಧಾನಿಗಳು, ವೇ|| ಬ್ರ || ಶ್ರೀ|| ಕೇಶವ ಅವಧಾನಿಗಳು
ಶಿಬಿರ ಶುಲ್ಕ : 750 ರೂ.
ಸಂಪರ್ಕಿಸಿ : 08182-237724, 9448836895 (ವೇ|| ಬ್ರ || ಶ್ರೀ|| ಕೇಶವ ಅವಧಾನಿಗಳು)

60 ಜನರಿಗೆ ಮಾತ್ರ ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಆದ್ದರಿಂದ ಆಸಕ್ತರು ಬೇಗನೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಪ್ರಾರ್ಥನೆ. ಶಿಬಿರಾರ್ಥಿಗಳು ತಮಗೆ ಅಗತ್ಯವೆನಿಸಿದ ಟಾರ್ಚ್, ಸೊಳ್ಳೆನಿರೋಧಕ ಸಾಮಗ್ರಿಗಳು, ಬೆಡ್ ಶೀಟ್ ಗಳನ್ನು ತಂದುಕೊಳ್ಳುವದು.

(ವಿ. ಸೂ.- ಶಿಬಿರದ ಯಾವದಾದರೊಂದು ದಿನ ಸುತ್ತಮುತ್ತಲಿನ ವೀಕ್ಷಣೀಯಸ್ಥಳಗಳ ಕಿರುಪ್ರವಾಸವನ್ನೂ ಆಯೋಜಿಸಲಾಗಿದೆ. ಅದಕ್ಕೆ 100 ರೂ ಶುಲ್ಕವನ್ನು ಇಡಲಾಗಿದೆ)

ಪೂಜ್ಯ ಶ್ರೀ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮಿಗಳವರು 04-09-2009ರಂದು ತಮ್ಮ ಚಾತುರ್ಮಾಸ್ಯ ವ್ರತವನ್ನು ಪೂರೈಸಿ ಸೀಮೋಲ್ಲಂಘನಕ್ಕಾಗಿ ಬೆಂಗಳೂರಿನ ಕಾರ್ಯಾಲಯಕ್ಕೆ ತೆರಳಿದ್ದಾರೆ ಮತ್ತು 15 ದಿನಗಳ ಕಾಲ ಪ್ರವಚನಗಳನ್ನು ನಡೆಸಿಕೊಡಲಿದ್ದಾರೆ. ಸ್ಥಳೀಯ ಜಿಜ್ಞಾಸುಗಳು ಈ ಲಾಭವನ್ನು ಪಡೆಯಬಹುದು.

ಶ್ರೀದಿಗ್ವಿಜಯ ರಾಮದೇವರಿಗೆ ರಜತ ಕವಚ ಸಮರ್ಪಣೆ - ಭಕ್ತರಿಂದ
(ಪ್ರಾರ್ಥನೆ ಸೀತಾಲಕ್ಷ್ಮಣಹನುಮತ್ ಸಮೇತರಾದ ಶ್ರೀದಿಗ್ವಿಜಯರಾಮಚಂದ್ರದೇವರಿಗೆ ಬೆಳ್ಳಿಯ ಕವಚ ಮಾಡಿಸಬೇಕೆಂಬ ಭಕ್ತಮಹಾಶಯರುಗಳ ಅಪೇಕ್ಷೆಯಂತೆ ಈಗ ಒಂದು ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಆದರೆ ಅಂದಾಜು ವೆಚ್ಚ ಎರಡು ಲಕ್ಷವಾಗುವದರಿಂದ ಭಕ್ತಾದಿಗಳು ಉದಾರವಾಗಿ ಧನಸಹಾಯವನ್ನು ಮಾಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇವೆ .)

ಶ್ರೀ ಶ್ರೀಗಳವರು ಸ್ಥಾಪಿಸಿದ ಶ್ರೀದಿಗ್ವಿಜಯ ಜಟಾಧಾರಿ ಶ್ರೀರಾಮಚಂದ್ರನಿಗೆ ಮತ್ತು ಸೀತಾ, ಲಕ್ಷ್ಮಣಮಾರುತಿಯ ವಿಗ್ರಹಗಳಿಗೆ ಭಕ್ತಮಹಾಶಯರುಗಳಿಂದ 25/10/2009 ರಂದು ಬೆಳ್ಳಿಕವಚ ಸಮರ್ಪಣೆ ಮಾಡಲಾಗುವದು. ಅದಕ್ಕಾಗಿ 24 ಮತ್ತು 25ರಂದು ವಿಶೇಷಕಾರ್ಯಕ್ರಮಗಳು ನಡೆಯಲಿವೆ. 24/10/2009ರಂದು ಹತ್ತು ಜನ ವೇದವಿದ್ವಾಂಸರಿಂದ ರಾಮಾಯಣ ಪಾರಾಯಣ ಮತ್ತು ಯಜುರ್ವೇದಪಾರಾಯಣಗಳು. ಸಂಜೆ: ಕ್ರಮಾರ್ಚನೆ, ಕಲಶಸ್ಥಾಪನೆ, ಉದಕಶಾಂತಿ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. 25/10/2009ರಂದು ಶ್ರೀದಿಗ್ವಿಜಯ ರಾಮದೇವರಿಗೆ ಕಲಾಹೋಮ, ಧಾತ್ರೀ ಹೋಮ ಮತ್ತು ಶ್ರೀ ಶ್ರೀಗಳವರ ಸಮಾಧಿಮಂದಿರದಲ್ಲಿ ವಿಶೇಷಪೂಜೆ, ನಂತರ ಕವಚ ಸಮರ್ಪಣೆ ನಡೆಯುತ್ತದೆ. ಪರಮಾರ್ಥಸಾ ಧನೆಯ ಅಡ್ಡಿಗಳಿಗೆ ರಕ್ಷಾಕವಚದಂತಿರುವ ಶ್ರೀದಿಗ್ವಿಜಯ ರಾಮಚಂದ್ರನ ರಜತಕವಚಸಮರ್ಪಣಾ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ.

ವೇದಾಂತ ಸಪ್ತಾಹ ಆಹ್ವಾನ ಪತ್ರಿಕೆ



Program List of April 2016

Download PDF



Keep in touch

For all the latest and regular communication and updates:

whatsapp_image

Please send a WhatsApp message "Shri Gurubhyo Namaha" to +91-8073081405 and add the phone number as Adhyatma Prakasha Karyalaya to get messages on adhyatma in Kannada.

Videos and talks of scholars from Karyalaya will be available at: Youtube

Group interaction of like minded people is at Facebook

Please subscribe to the same

twitter image

Please follow twitter handle of Adhyatma Prakasha Karyalaya Twitter

Visitors